ಏಪ್ರಿಲ್ ೩೦ - ಏಪ್ರಿಲ್ ತಿಂಗಳ ಮೂವತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೦ನೇ ದಿನ (ಅಧಿಕ ವರ್ಷದಲ್ಲಿ ೧೨೧ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೫ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೦೦೬ - ಇತಿಹಾಸದಲ್ಲಿ ದಾಖಲಿತ ಅತ್ಯಂತ ಪ್ರಕಾಶಮಾನವಾದ ಸೂಪರ್‍ನೋವ ಎಸ್‍ಎನ್೧೦೦೬ ಉಂಟಾಯಿತು. ೧೮೦೩ - ಅಮೇರಿಕ ಸಂಯುಕ್ತ ಸಂಸ್ಥಾನವು ಫ್ರಾನ್ಸ್ನಿಂದ ಲೂಯಿಸಿಯಾನ್ ಪ್ರದೇಶವನ್ನು ೧೫ ಮಿಲಿಯನ್ ಡಾಲರ್ಗಳಿಗೆ ಖರೀದಿಸಿತು. ಇದರಿಂದ ಅಮೇರಿಕ ದೇಶದ ಗಾತ್ರ ದ್ವಿಗುಣಕ್ಕಿಂತ ಹೆಚ್ಚಾಯಿತು. ೧೯೪೫ - ಅಡೊಲ್ಫ್ ಹಿಟ್ಲರ್ ತನ್ನ ಮಡಿದಿ ಈವ ಬ್ರೌನ್ಳೊಂದಿಗೆ ಆತ್ಮಹತ್ಯೆ ಮಾಡಿಕೊಂಡನು. ೧೯೭೫ - ಸೈಗಾನ್ ಅನ್ನು ಎಡಪಂಥದ ಸೈನ್ಯೆ ವಶಪಡಿಸಿಕೊಂಡು ವಿಯೆಟ್ನಾಮ್ ಯುದ್ಧ ಅಧಿಕೃತವಾಗಿ ಕೊನೆಗೊಂಡಿತು. ೧೯೯೧ - ಬಾಂಗ್ಲಾದೇಶವನ್ನು ಅಪ್ಪಳಿಸಿದ ಭೀಕರ ಸುಂಟರಗಾಳಿಗೆ ಅಂದಾಜಿತ ೧೩೮,೦೦೦ ಜನರು ಬಲಿಯಾದರು. ೧೯೯೩ - ಸೆರ್ನ್ನಲ್ಲಿ ವಿಶ್ವವ್ಯಾಪಿ ಅಂತರಜಾಲ ಸೃಷ್ಟಿಯಾಯಿತು. == ಜನನ == ೧೬೬೨ - ಇಂಗ್ಲೆಂಡ್‌ನ ಮಹಾರಾಣಿ ಎರಡನೇ ಮೇರಿ. ೧೯೧೬ - ಕ್ಲಾಡ್ ಶಾನನ್, ಅಮೇರಿಕ ದೇಶದ ತಂತ್ರಜ್ಞಾನಿ ಮತ್ತು ಗಣಿತಜ್ಞ. ೧೮೭೦ - ದಾದಾ ಸಾಹೇಬ್ ಫಾಲ್ಕೆ ಅಲಿಯಾಸ್ ದುಂಡಿರಾಹ್ ಗೋಬಿಂದ್ ಫಾಲ್ಕೆಮಹಾರಾಷ್ಟ್ರದ ತ್ರಯಂಬಕೇಶ್ವರ್‌ನಲ್ಲಿ ಜನನ. == ನಿಧನ == ೧೯೪೫ - ಅಡೋಲ್ಫ್ ಹಿಟ್ಲರ್, ಜರ್ಮನಿಯ ನಾಜಿ ಸರ್ವಾಧಿಕಾರಿ. ೧೦೩೦ - ಸುಲ್ತಾನ್ ಮೊಹಮ್ಮದ್ ಘಝನಿ. == ಹಬ್ಬಗಳು/ಆಚರಣೆಗಳು == ವಿಯೆಟ್ನಾಮ್ - ಬಿಡುಗಡೆ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ